== ಹಿನ್ನೆಲೆ == ನಮ್ಮ ಕರ್ನಾಟಕ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು 2023-05-24 ವೇಬ್ಯಾಕ್ ಮೆಷಿನ್ ನಲ್ಲಿ. ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತೊಂದು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ, ಅವು ಈ ಕೆಳಗಿನಂತೆ ಇವೆ: === 1. ಬೆಂಗಳೂರು ವಿಭಾಗ === ಕರ್ನಾಟಕದ ರಾಜಧಾನಿ ಬೆಂಗಳೂರು ಆಗಿದೆ. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ. === 2. ಮೈಸೂರು ವಿಭಾಗ === ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ. === 3. ಬೆಳಗಾವಿ ವಿಭಾಗ === ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ ಮತ್ತು ಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ. === 4. ಕಲಬುರ್ಗಿ ವಿಭಾಗ === ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಹೊಸದಾಗಿ ಉದಯವಾದ ವಿಜಯನಗರ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ. == ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ == == ಉಲ್ಲೇಖಗಳು ==